ರಕ್ಷಿಸು ಲೋಕನಾಯಕನೆ ರಕ್ಷಿಸು
ರಾಗ: ಶಂಕರಾಭರಣ;   ತಾಳ: ಅಟ್ಟ;
ಎಷ್ಟೆಷ್ಟು ಜನ್ಮವ ಕಳೆದೆನೊ 
ಇನ್ನೆಷ್ಟು ಜನ್ಮವ ಕಳೆವೆನೊ
ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟು
ಇಷ್ಟವ ಪಾಲಿಸೊ ಇಭರಾಜವರದನೆ    ||೧||

ಬಾಲತನದಿ ಬಹು ನೊಂದೆನೊ ನಾನಾ
ಲೀಲೆಯಿಂದಲಿ ಕಾಲಕಳೆದೆನೊ
ಲೋಲಲೋಚನ ಎನ್ನ ಮೊರೆ ಕೇಳುತ ಬೇಗ
ಜಾಲವ ಮಾಡದೆ ಪಾಲಿಸೊ ನರಹರಿ    || ೨ ||

ಮುದುಕನಾಗಿ ಚಿಂತೆಪಡುವೆನೊ ನಾ
ಕದಡು ದುಃಖ ಪಡಲಾರೆನೊ
ಉದಧಿಶಯನ ಶ್ರೀ ಪುರಂದರವಿಠಲ
ಮುದದಿಂದ ರಕ್ಷಿಸೊ ಖಗರಾಜ ಗಮನ    || ೩||ದಾಸವಾಣಿ
   ---೦---
ರಚನೆ ಪುರಂದರದಾಸರು.

ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ